ಅಕ್ಕ ೯ ನೇ ವಿಶ್ವ ಕನ್ನಡ ಸಮಾವೇಶ ಸೆಪ್ಟೆಂಬರ್ ೨, ೩ ಮತ್ತು ೪
ಅಕ್ಕ ೯ ನೇ ವಿಶ್ವ ಕನ್ನಡ ಸಮಾವೇಶ ಅತ್ಯಂತ ವಿಜ್ರುಂಭಣೆಯಿಂದ ನಡೆಸಲು ಸೆಪ್ಟೆಂಬರ್ ೨, ೩ ಮತ್ತು ೪ ರಂದು ಅಕ್ಕ ೨೦೧೫-೧೬ ರ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ ಹಾಗೂ ಕಾರ್ಯಕ್ರಮಗಳ ರೂಪುರೇಷೆಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಿದೆ. ಅಕ್ಕ ಕನ್ನಡ ವಿಶ್ವ ಪರ್ವಕ್ಕೆ ಪ್ರಪಂಚಾದ್ಯಂತ ೫ ಸಾವಿರಕ್ಕೂ ಹೆಚ್ಚು ಕನ್ನಡಿಗರ ಆಗಮನದ ನಿರೀಕ್ಷೆಯಿದೆ.
ಎಡಿಸನ್, ನ್ಯೂಜೆರ್ಸಿಯಲ್ಲಿ ಕೈಗಾರಿಕಾ ಮಂತ್ರಿಗಳೊಂದಿಗೆ ಮುಕ್ತ ಸಂವಾದ
ಅಮೇರಿಕ ಕನ್ನಡ ಕೂಟಗಳ ಆಗರ ಅಕ್ಕ ವಿಶ್ವ ಕನ್ನಡ ಸಂಸ್ಥೆಯು ಮಾನ್ಯ ಕರ್ನಾಟಕ ಕೈಗಾರಿಕಾ ಮಂತ್ರಿ ದೇಶಪಾಂಡೆ ಯವರ ಜೊತೆ ಮುಕ್ತ ಸಂವಾದವನ್ನು ಡಿಸೆಂಬರ್ ೪ ೨೦೧೫ ರಂದು ಸಂಜೆ ೬:೩೦ ಕ್ಕೆ ಎಡಿಸನ್, ನ್ಯೂಜೆರ್ಸಿ ಮಹಾನಗರದಲ್ಲಿ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲ ಕನ್ನಡಿಗರು ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಕ್ಕ ಕಾರ್ಯಕಾರಿ ಸಮಿತಿಯು ಆತ್ಮೀಯತೆಯಿಂದ ಆಹ್ವಾನಿಸುತ್ತಿದೆ
ಅಕ್ಕ ಅಧ್ಯಕ್ಷ “ರಾಜ್ ಪಾಟೀಲ್” ರವರಿಗೆ ಭವ್ಯ ಸನ್ಮಾನ
ಅಕ್ಕ ೨೦೧೫-೧೬ ರ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜ್ ಪಾಟೀಲರಿಗೆ ಮೈಸೂರಿನಲ್ಲಿ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ರಾಜ್ ಪಾಟೀಲರು ಅಕ್ಕ ಸಂಸ್ಥೆಯ ಮೂಲ ಉದ್ದೇಶ ಮತ್ತು ಯೋಜನೆಗಳ ಕುರಿತು ಕಿರು ಪರಿಚಯ ಮಾಡಿಕೊಟ್ಟರು.

Submit a comment
Your email address will not be published. Required fields are marked *
There are 0 comments