August Edition

ಸತ್ಯ : ರಘು ನಮಸ್ಕಾರ, ಯಾವುದೇ ಒಂದು ಸಮಾರಂಭದಲ್ಲಿ ಊಟ ಚೆನ್ನಾಗಿದ್ದರೆ ಅದು ಅರ್ಧ ಯಶಸ್ವಿಯಾದಂತೆ, ಸಮಾರಂಭದ ಎಲ್ಲಾ ಕಾರ್ಯಕ್ರಮಗಳು ಒಂದು ತೂಕವಾದರೆ ಊಟದ್ದೇ ಒಂದು ತೂಕ, ಅಂದರೆ ಬಾಣಸಿಗರ ಪಾತ್ರ ಅತಿ ಮುಖ್ಯ. ಬಾಣಸಿಗರ (chef) ಬಗ್ಗೆ ನಿಮ್ಮೆರಡು ಮಾತು?

ರಘು : ನಮಸ್ಕಾರ ಸತ್ಯ, ನಿಮ್ಮ ಮಾತು ನಿಜ, ಯಾವುದೇ ಸಮಾರಂಭದಲ್ಲಿ ಊಟ ತಿಂಡಿಯ ಪಾತ್ರ ಅತಿ ಮುಖ್ಯ. ಈ ಬಾರಿ ಸಮಾರಂಭದಲ್ಲಿ ನಮಗೆ ಬಗೆಬಗೆಯ ಖಾದ್ಯವನ್ನು ಉಣ ಬಡಿಸುತ್ತಿರುವವರು ಸತೀಶ್ ರಾವ್ ಮತ್ತು ತಂಡ. ಸತೀಶ್ ರಾವ್ ಬಗ್ಗೆ ಹೆಚ್ಚಿಗೆ ಏನು ಹೇಳೋ ಅವಶ್ಯಕತೆಯೇ ಇಲ್ಲ, ನೀವು ಗೂಗಲ್ ಮಾಡಿದರೆ ಅವರ ಕೈರುಚಿಯ ಮಹತ್ವ ತಿಳಿಯುತ್ತದೆ. ಸತೀಶ್ ರಾವ್ celebrity chef, ಶ್ವೇತಭವನದಲ್ಲಿ ಹೆಸರಾಂತ ಗಣ್ಯರಿಗೆ ಭಾರತೀಯ ಖಾದ್ಯಗಳನ್ನು ಸಿದ್ಧಪಡಿಸುವವರು ಇವರೇ. ಒಬಾಮಾ, ಮೋದಿ, ಅಬ್ದುಲ್ ಕಲಾಂ, ಎಸ್ಎಂ ಕೃಷ್ಣ, ಎಆರ್ ರೆಹಮಾನ್, ಜೇಸುದಾಸ್, ಜಾಕಿ ಹುಸೇನ್ ಇತ್ಯಾದಿ ಇತ್ಯಾದಿ ಇವರ ರುಚಿಗೆ ಮಾರು ಹೋದವರು. ಈ ಬಾರಿ ಊಟದ ಗುಣಮಟ್ಟದ ವಿಷಯದಲ್ಲಿ ಸೂಜಿ ಮೊನೆಯಷ್ಟು ರಾಜಿಯಿಲ್ಲದೆ ನಿಮಗೆ ಉತ್ಕೃಷ್ಟವಾದುದನ್ನೇ ಉಣಬಡಿಸುತ್ತೇವೆಂದು ತಿಳಿಸಲು ಸಂತೋಷಪಡುತ್ತೇನೆ.

kalam-satish-05-1470400902

ಬಾಣಸಿಗ ಸತೀಶ್ ರಾವ್ ಕೈರುಚಿ ಸವಿಯುತ್ತಿರುವ ನಮ್ಮೆಲ್ಲರ ಹೆಮ್ಮೆಯ ಅಬ್ದುಲ್ ಕಲಾಂ

2016-08-08 12.31.05

2016-08-08 12.31.35