Association of Kannada Kootas of America

President Message

Madhu Rangaiah

ಮಧು ರಂಗಯ್ಯ

President, AKKA

ಎಲ್ಲಾದರೂ ಇರು, ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ
ಕಲ್ಪತರು!

ನೀ ಮೆಟ್ಟುವ ನೆಲ – ಅದೇ ಕರ್ನಾಟಕ
ನೀ ನೇರುವ ಮಾಲೆ – ಸಹ್ಯಾದ್ರಿ
ನೀ ಮುಟ್ಟುವ ಮರ – ಶ್ರೀಗಂಧದ ಮರ
ನೀ ಕುಡಿಯುವ ನೀರು – ಕಾವೇರಿ
ಕುವೆಂಪು

 

ಪ್ರೀತಿಯ ಕನ್ನಡಿಗರಿಗೆ ನಮಸ್ಕಾರಗಳು,

ಅಕ್ಕ ಸಂಘಟನೆಗೆ 25 ವರ್ಷಗಳು ತುಂಬಿರುವ ಬೆಳ್ಳಿ ಹಬ್ಬ ಸಂದರ್ಭದಲ್ಲಿ ಸಂಘಟನೆಯ ಜವಾಬ್ದಾರಿ ಸಿಕ್ಕಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಅಮೆರಿಕದಲ್ಲಿನ ಕನ್ನಡಿಗರನ್ನು ಮತ್ತಷ್ಟು ಒಂದುಗೂಡಿಸಿ ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುವುದು ನಮ್ಮ ಮೊದಲನೇ ಆಧ್ಯತೆ. ಹೊಸ ತಲೆಮಾರಿನ ಅನೇಕರು ಅಮೆರಿಕಕ್ಕೆ ಬರುತ್ತಿದ್ದಾರೆ, ಅವರನ್ನು ಸಂಘಟಿಸಿ ಕನ್ನಡದ ಕುರಿತಾದ ಅಭಿಮಾನ, ಆಲೋಚನೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾದಷ್ಟು ಮಾರ್ಗದರ್ಶನ ಮಾಡುವುದು ಮತ್ತು ಸಪ್ತ ಸಾಗರದಾಚೆಗೂ ಕನ್ನಡದ ಕಂಪನ್ನು ಹಬ್ಬಿಸುವುದು ನಮ್ಮ ಕರ್ತವ್ಯಗಳಲ್ಲಿ ಒಂದು. ಈ ವಿಶೇಷ ಸಂದರ್ಭದಲ್ಲಿ ನಮ್ಮ ಮುಂದಿರುವ ಅಧ್ಯತೆಗಳು ಹೀಗಿವೆ.

ಸಮಾಜದಲ್ಲಿ ಪ್ರೀತಿ ಮತ್ತು ಸಹಕಾರವನ್ನು ಬೆಳೆಸಲು, ರಕ್ತದಾನ ಶಿಬಿರ ಮತ್ತು ‘ಸಮಾಜ ಸೇವೆ (ಚಾರಿಟಿ)’, ಪರಿಸರ ಸಮತೋಲನವನ್ನು ಕಾಪಾಡಲು ಮತ್ತು ಭವಿಷ್ಯದ ಪೀಳಿಗೆಗೆ ಸುಂದರವಾದ ಪ್ರಕೃತಿಯನ್ನು ಉಳಿಸಲು ‘ವನ್ಯ ಜೀವಿ ಸಂರಕ್ಷಣೆ’, ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮತ್ತು ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ರೂಪಿಸಲು ‘ವಿದ್ಯಾರ್ಥಿವೇತನ’, ಅನಿವಾಸಿ ಕನ್ನಡ ಪ್ರತಿಭೆಯನ್ನು ಗುರುತಿಸಲು ‘ಪ್ರತಿಭೆ ಪುರಸ್ಕಾರ’, ತಾಯ್ನಾಡಿನ ಮತ್ತು ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಮೂಡಿಸುಲು ‘ಕನ್ನಡ ಕಲಿಕೆ’, ಹುಟ್ಟೂರಿನ ಅಭಿವೃದ್ಧಿಗಾಗಿ ‘ತವರು ಸೇವೆ’ ಇತ್ಯಾದಿ.,

ಈ ಬಾರಿ ರಜತ ಮಹೋತ್ಸವದ ಅಂಗವಾಗಿ ಅಕ್ಕ ಸಮ್ಮೇಳನವನ್ನು ಅತಿ ವಿಜೃಂಭಣೆಯಿಂದ ಸಂಘಟಿಸುವುದಕ್ಕೆ ನಿಮ್ಮೆಲ್ಲರ ತನು, ಮನ, ಧನ ಧಾರೆಯೆರಬೇಕೆಂದು ಕಳಕಳಿಯಿಂದ ಪ್ರಾರ್ಥಿಸುತ್ತೇನೆ.

ನಿಮ್ಮೆಲ್ಲರನ್ನೂ ಬರುವ ಅಕ್ಕ ಸಮ್ಮೇಳನಕ್ಕೆ ನಮ್ಮ ಇಡೀ ತಂಡದೊಂದಿಗೆ ತುಂಬು ಹೃದಯದಿಂದ ಸ್ವಾಗತ ಮಾಡಿ, ಭೇಟಿಯಾಗಲು ಕಾತರನಾಗಿದ್ದೇನೆ.

ಇಂತಿ ನಮಸ್ಕಾರಗಳು
ಮಧು ರಂಗಯ್ಯ,
ಅಧ್ಯಕ್ಷರು, ಅಕ್ಕ ಕಾರ್ಯಕಾರಿ ಸಮಿತಿ

ಹಚ್ಚೇವು ಕನ್ನಡದ ದೀಪ
ಕರುನಾಡದೀಪ ಸಿರಿನುಡಿಯದೀಪ