Snehada Kadalalli

ಬನ್ನಿ ಆಡೋಣ ‘ಸ್ನೇಹದ ಕಡಲಲ್ಲಿ’ - ಅಕ್ಕ 2024ರ ಒಂದು ವಿಶಿಷ್ಟ, ವಿನೋದಭರಿತ ಕಾರ್ಯಕ್ರಮ!!

ಅಕ್ಕ-2024ರ ಅತ್ಯಾಕರ್ಷಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ವಿಭಿನ್ನವಾದ, ಅಮೋಘವಾದ ಒಂದು ಗೇಂ-ಶೋ ಇರುವುದು ನಿಮಗೆ ಗೊತ್ತೇ? ಕ್ಯಾಲಿಫೋರ್ನಿಯಾದ ಜನಪ್ರಿಯ ಕಲಾವಿದ ರಘು ಹಾಲೂರುರವರ ಸಾರಥ್ಯದಲ್ಲಿ ನಡೆಯುವ ‘ಸ್ನೇಹದ ಕಡಲಲ್ಲಿ’ ಕಾರ್ಯಕ್ರಮ ಸ್ಪರ್ಧಿಗಳನ್ನೂ, ಸಭಿಕರನ್ನೂ ಒಂದು ಹೊಚ್ಚ ಹೊಸ ರೀತಿಯ, ಹರ್ಷೋಲ್ಲಾಸ ತುಂಬಿದ ಸ್ನೇಹಪಯಣದಲ್ಲಿ ಕರೆದೊಯ್ಯಲಿದೆ.

ಐದೈದು ಸದಸ್ಯರನ್ನುಳ್ಳ ಅನೇಕ ತಂಡಗಳು ವೇದಿಕೆಯ ಮೇಲೆ ಈ ಸ್ಪರ್ಧೆಯಲ್ಲಿ ತರಹಾವರಿ ಚಟುವಟಿಕೆಗಳಲ್ಲಿ ಪರಸ್ಪರರ ಮೇಲೆ ಗೆಲ್ಲುವ ಪ್ರಯತ್ನ ಮಾಡುತ್ತಾರೆ. ಈ ಪಂದ್ಯದ ಅಂತಿಮ ಸುತ್ತು ಸ್ಟೀವ್ ಹಾರ್ವೆಯವರ ಪ್ರಸಿದ್ಧ ‘ಫ್ಯಾಮಿಲಿ-ಫ್ಯೂಡ್’ ನ ಮಾದರಿಯಲ್ಲಿ ನಡೆಯಲಿದೆ. ಕನ್ನಡಿಗರ-ಕನ್ನಡನಾಡಿನ ಸುತ್ತ ಹೆಣೆಯಲಾದ ಪ್ರಶ್ನೆಗಳಿಗೆ ಸ್ಪರ್ಧಿಗಳು ನೀಡುವ ಉತ್ತರಗಳು, ಅದೇ ಪ್ರಶ್ನೆಗಳಿಗೆ ಸಮೀಕ್ಷೆಯೊಂದರಲ್ಲಿ 100 ಜನರು ನೀಡಿದ ಉತ್ತರಗಳಿಗೆ ಎಷ್ಟು ಹೊಂದುತ್ತವೆ ಎಂಬಾ ಕುತೂಹಲವೇ ಈ ಸುತ್ತಿನ ಸ್ವಾರಸ್ಯ.

ನಿಮ್ಮ ತಂಡವನ್ನೂ ಈ ಸ್ನೇಹದ ಕಡಲಲ್ಲಿ ಕರೆದೊಯ್ಯುವ ಬಯಕೆಯೇ? ಹಾಗಿದ್ದರೆ ತಕ್ಷಣ ಇಲ್ಲಿ ನೋಂದಾಯಿಸಿಕೊಳ್ಳಿ.

Submit your entry to 'Snehada Kadalalli' - a unique, fun-filled gameshow at AKKA-2024!!

Snehada Kadalalli is a new and entertaining Kannada gameshow by the popular host Raghu Halur, who will take both the participants and the audience through an exciting and hilarious journey in the ocean of friendship riding on the waves of laughter.

Teams of five members each will compete in a variety of activities against each other in this gameshow. The final round will be on the same lines as Steve Harvey’s superhit TV gameshow ‘Family-Feud’, with teams trying to guess the most popular responses in a 100-people survey conducted prior to the game. The questions in Snehada Kadalalli will be centered on Kannada-Karnataka trivia, which makes it all the more fun!

Registration closed