AKKA Silver Jubilee World Kannada Conference 2026

Chairman Message

Dr. Amarnath Gowda

Chairman, Board of Trustees

ಪ್ರೀತಿಯ ಕನ್ನಡಬಾಂಧವರೇ,

ಡೆಟ್ರಾಯಿಟ್ನಲ್ಲಿ ನಡೆದ ಪ್ರಥಮ ಅಕ್ಕ ವಿಶ್ವ ಕನ್ನಡ ಸಮ್ಮೇಳನದಿಂದ ಆರಂಭಿಸಿ, ಎರಡು ದಶಕಗಳಿಗಿಂತ ಹೆಚ್ಚು ಕಾಲ, ಅಕ್ಕವು ವಿಶ್ವದ ಕನ್ನಡಿಗರನ್ನು ಒಗ್ಗೂಡಿಸುತ್ತಾ, ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಉದ್ಯಮಶೀಲತೆಯ ಹಬ್ಬಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.ಇದೀಗ, 2026ರಲ್ಲಿ ಅಕ್ಕ ತನ್ನ 25ನೇ ವಾರ್ಷಿಕೋತ್ಸವವನ್ನು ಹೆಮ್ಮೆಭರಿತವಾಗಿ ಆಚರಿಸುತ್ತಿದೆ. ಈ ಮಹತ್ವದ ಸಂಭ್ರಮದಲ್ಲಿ ಕನ್ನಡಿಗರ ಒಗ್ಗಟ್ಟನ್ನು ಮಾತ್ರವಲ್ಲದೆ, ಅಮೇರಿಕಾ ಮತ್ತು ಕರ್ನಾಟಕದಾದ್ಯಂತ ವಿಭಿನ್ನ ದತ್ತಿ (ಚ್ಯಾರಿಟಿ) ಕಾರ್ಯಕ್ರಮಗಳ ಮೂಲಕ ಸಮಾಜಸೇವೆಯ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಲಾಗುತ್ತಿದೆ. ಆರೋಗ್ಯ, ಶಿಕ್ಷಣ ಮತ್ತು ಪರಿಸರ ಕ್ಷೇತ್ರಗಳಲ್ಲಿ ಅಕ್ಕದ ಸೇವಾ ಕಾರ್ಯಕ್ರಮಗಳು ಸಾವಿರಾರು ಜನರ ಜೀವನವನ್ನು ಸ್ಪರ್ಶಿಸುವ ಭರವಸೆ ಹೊಂದಿವೆ.ಅಕ್ಕ—ವಿಶ್ವ ಕನ್ನಡಿಗರ ಗೌರವ ಮತ್ತು ಒಗ್ಗಟ್ಟಿನ ಸಂಕೇತ.

ಈ ಇತಿಹಾಸ ಪ್ರಸಿದ್ಧ ಕ್ಷಣದ ಭಾಗವಾಗಲು ನಿಮ್ಮೆಲ್ಲರ ಪಾಲ್ಗೊಳ್ಳುವಿಕೆಗೆ ಹೃತ್ಪೂರ್ವಕ ಆಹ್ವಾನ.

– ಅಮರನಾಥ ಗೌಡಛೇರ್ಮನ್, ಅಕ್ಕ BOT

Chairman Message

Amarnath Gowda